ಪತ್ರಕರ್ತರ ತುರ್ತು ನಿಧಿ

admin

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ : ಕೇಶವ ರೆಡ್ಡಿ ರಾಯಚೂರು, ಅ.7: ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿ ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.‌ಆಯುರ್ವೇದ ಚಿಕಿತ್ಸಾ ಪದ್ದತಿಯ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಚಿಕಿತ್ಸಾ ಪದ್ಧತಿಗಳು ವ್ಯಾಪಕವಾಗುವುದಕ್ಕೂ ಮುನ್ನ ನಮ್ಮ ಪೂರ್ವಜರು ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಿದ್ದರು ಎಂದು ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ರಕ್ತದಾನ ಮೂಲಕ ಅರ್ಥಪೂರ್ಣ ಆಚರಣೆ- ಎ.ವಂಸತ ಕುಮಾರ

– ಇಂದು ತಾಯಿಗೆ ಪರ್ಯಾಯವಾಗಿ ಬಾಡಿಗೆ ತಾಯಿ ಸಿಗಬಹುದು ರಕ್ತಕ್ಕೆ ಪರ್ಯಾಯವಿಲ್ಲ: ಶಾಸಕ ಡಾ.ಶಿವರಾಜ್ ಪಾಟೀಲ್ ರಾಯಚೂರು,ಅ.09- ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತನ್ನ ಬೆಳ್ಳಿ ಮಹೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವ ಅವಕಾಶಗಳಿದ್ದರೂ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ರಕ್ತದಾನದಂತ ಸಾಮಾಜಿಕ ಕೆಲಸದ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ಅಂತ ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ್ ಹೇಳಿದರು. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ…

ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಎನ್.ಎಸ್.ಬೋಸರಾಜು ಚಾಲನೆ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಪತ್ರಕರ್ತರ ಸಮಾಜಮುಖಿ ಕಾರ್ಯ ಶ್ಲಾಘನೀಯ: ಎನ್.ಎಸ್.ಬೋಸರಾಜು ಮೆಚ್ಚುಗೆ ರಾಯಚೂರು ಅ 3: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತನ್ನ ಬೆಳ್ಳಿ ಮಹೋತ್ಸವವನ್ನ ಕ್ರಿಯಾಶೀಲವಾಗಿ , ಜನಪರ, ಸಾಮಾಜಿಕ ಉತ್ಸವದ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಅಂತ ಮಾಜಿ ಸಚಿವ, ವಿಧಾನ ಪರಿಷತ್ ಶಾಸಕರಾದ ಎನ್ ಎಸ್.ಬೋಸರಾಜು ಹೇಳಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್…

ಪತ್ರಕರ್ತರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ: ಜಿಲ್ಲಾಧಿಕಾರಿ ಪೂವಿತಾ ಎಸ್ ಚಾಲನೆ

– ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಕ್ರೀಡಾಕೂಟ ರಾಯಚೂರು,ಸೆ.26: ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆ ಅಧಿಕಾರಿಗಳ ಸೌಹಾರ್ದ ಕ್ರಿಕೆಟ್ ಟೂರ್ನಮೆಂಟ್ ಗೆ ಜಿಲ್ಲಾಧಿಕಾರಿ ಪೂವಿತಾ ಎಸ್ ಅವರು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ಇಂದು ಪೋಲೀಸ್ ಪರೇಡ್ ಮೈದಾನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದ…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ

– ಪತ್ರಕರ್ತರ ಒತ್ತಡದ ಬದುಕಿನಲ್ಲಿ ಕ್ರೀಡಾಕೂಟಗಳು ಮುಖ್ಯ: ಡಾ.ಸುರೇಶ ಜಿ ರಾಯಚೂರು, ಸೆ.24: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮದ ಅಂಗವಾಗಿ ಪತ್ರಕರ್ತರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಪತ್ರಕರ್ತರ ಒತ್ತಡದ ಬದುಕಿನಲ್ಲಿ ಕ್ರೀಡೆ ಅತ್ಯಂತ ಮುಖ್ಯವಾಗಿದ್ದು, ಪತ್ರಕರ್ತರು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ ಹೇಳಿದರು. ನಗರದ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ: ಕಾರ್ಯಕ್ರಮ ಯಶಸ್ವಿಗೆ ಸಂಪಾದಕರ ಸಲಹೆ

ಪತ್ರಿಕಾ ಭವನದಲ್ಲಿ ನಡೆದ ಸಂಪಾದಕರ ಸಭೆ ಯಶಸ್ವಿ ರಾಯಚೂರು ಸೆ.19: ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಯಚೂರಿನ ಪತ್ರಿಕಾ ಭವನದಲ್ಲಿ ನಡೆದ ಸಂಪಾದಕರ ಸಭೆ ಯಶಸ್ವಿಯಾಗಿ ಜರುಗಿತು. ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಂಪಾದಕರ ಸಭೆಯಲ್ಲಿ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಕ್ಟೋಬರ್‌ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಬೆಳ್ಳಿ ಮಹೋತ್ಸವ ಸಮಾರಂಭದ ಯಶಸ್ವಿಗೆ ಸಂಪಾದಕರು ಸಲಹೆ ಸೂಚನೆ ನೀಡುವಂತೆ ಕೋರಿದರು. ರಾಜ್ಯ ಮಟ್ಟದ…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿಮಹೋತ್ಸವ : ಪದವಿ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಗೆ ಬಸವರಾಜ್ ನಾಗಡದಿನ್ನಿ ಚಾಲನೆ

ರಾಯಚೂರು ಸೆ.12: ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನ ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ್ ನಾಗಡದಿನ್ನಿ ಹೇಳಿದರು. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಹಿನ್ನೆಲೆ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ “ಸಾಮಾಜಿಕ ಮಾಧ್ಯಮಗಳು ಮತ್ತು ಜೆನ್ ಜಿ: ಜಾಗೃತಿಯೋ ಅಥವಾ…

ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಸಂಭ್ರಮ: ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಗೆ ಹಿರಿಯ ಪತ್ರಕರ್ತ ದತ್ತು ಸರ್ಕಿಲ್ ಚಾಲನೆ

 / September 11,2026
– ವಿದ್ಯಾರ್ಥಿಗಳಲ್ಲಿನ ಮಾಧ್ಯಮಗಳ ಬಗೆಗಿನ ಕುತೂಹಲ ತಿಳಿಯಲು ಉತ್ತಮ ವೇದಿಕೆ – ಆರ್.ಗುರುನಾಥ್ ರಾಯಚೂರು, ಸೆ11: ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಅಂಗವಾಗಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವೇದಿಕೆ ಕಾರ್ಯಕ್ರಮವನ್ನ ಹಿರಿಯ ಪತ್ರಕರ್ತರಾದ ದತ್ತು ಸರ್ಕಿಲ್ ಅವರು ಉದ್ಘಾಟಿಸಿ, ಈ ಮೂಲಕ ಬೆಳ್ಳಿಮಹೋತ್ಸವದ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. “ಮಾಧ್ಯಮಗಳು ಮತ್ತು ಪ್ರಜಾಪ್ರಭುತ್ವ : ಇಂದಿನ ಸವಾಲುಗಳು ಹಾಗೂ ನೈತಿಕತೆ ” ವಿಷಯ ಕುರಿತು ಪ್ರಬಂಧ…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಸೆಪ್ಟಂಬರ್ 11 ಹಾಗೂ 12 ರಂದು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ

ರಾಯಚೂರು: ಪತ್ರಕರ್ತರ ಹಿತಾಸಕ್ತಿ ಹಾಗೂ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ‘ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ (ರಿ)’ ಸಂಸ್ಥೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವದ ಅಂಗವಾಗಿ ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವಜನತೆ, ಮಾಧ್ಯಮ ಕ್ಷೇತ್ರದ ಬದಲಾವಣೆ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಎದುರಾಗುತ್ತಿರುವ ಸವಾಲುಗಳ ಕುರಿತು ವಿದ್ಯಾರ್ಥಿಗಳಲ್ಲಿ ಚಿಂತನೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆಗಳನ್ನು…

ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್‌ನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುದಾನ ಮೀಸಲಿಡಲು ಮನವಿ

ರಾಯಚೂರು ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆ ರಾಯಚೂರು ನಗರದ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿ ಮಹಾನಗರ ಪಾಲಿಕೆ ಆಯುಕ್ತರು, ಆಡಳಿತಾಧಿಕಾರಿಗಳಾದ ಜುಬಿನ್ ಮೊಹಾಪಾತ್ರ ಅವರಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಈ ಹಿಂದಿನ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆ ಹಾಗೂ ಪೌರಾಯುಕ್ತರ ಉಪಸ್ಥಿತಿಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ…

ಹಿರಿಯ ಪತ್ರಕರ್ತ ದಿ. ಸೈಯದ್ ಅಶ್ರಫ್ ಕುಟುಂಬಕ್ಕೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಿಂದ 1 ಲಕ್ಷ ರೂ. ನೆರವು

ರಿಪೋರ್ಟರ‌್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ – ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ರಾಯಚೂರು, ಫೆ.16: ಇತ್ತೀಚೆಗೆ ನಿಧನರಾದ ರಾಯಚೂರಿನ ಹಿರಿಯ ಪತ್ರಕರ್ತ ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಪತ್ರಕರ್ತರ ತುರ್ತು ನಿಧಿಯಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು. ನಗರದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ‌ನ‌‌ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮೃತರ ಕುಟುಂಬಕ್ಕೆ 1 ಲಕ್ಷ…

ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮಗಳ ವೇಳಾಪಟ್ಟಿ ಬಿಡುಗಡೆ

  ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮಗಳ ವೇಳಾಪಟ್ಟಿ ಬಿಡುಗಡೆ ರಾಯಚೂರು ಜ21: ವಿಜ್ಞಾನ ತಂತ್ರಜ್ಞಾ‌ನ ಹಾಗೂ ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜುರಿಂದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮಗಳ ವೇಳಾಪಟ್ಟಿ, ಬ್ಯಾನರ್, ಪೋಸ್ಟರ್, ಬಲೂನ್, ಪಾಂಪ್ಲೆಟ್‌ಗಳು, ಪಾಸ್ ಹಾಗೂ ಸಾಮಾಜಿಕ ಜಾಲತಾಣಗಳ ಬಿಡುಗಡೆ. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇಳಾಪಟ್ಟಿ ಬಿಡುಗಡೆ. ಈ ವೇಳೆ ಜಿಲ್ಲಾಧಿಕಾರಿ ನಿತೀಶ್ ಕೆ.‌ ಸೇರಿ ಇತರ ಅಧಿಕಾರಿಗಳು, ಹಲವಾರು…

ರಾಯಚೂರು ರಿಪೋರ್ಟರ‍್ಸ್ ಗಿಲ್ಡ್‌ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು ಜ20 : ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ ನನ್ನ ಅನುದಾನದಲ್ಲಿ 10 ಲಕ್ಷ ರೂ.ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯವಿದ್ದರೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ ಹೇಳಿದರು. ಅವರು ಇಂದು ನಗರದ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ಒಳಾಂಗಣ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿ ಮಾತನಾಡಿದರು. ಕಳೆದ…

ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ: ರಾಯಚೂರು ತಂಡಕ್ಕೆ ದ್ವಿತೀಯ ಸ್ಥಾನ

ರಾಯಚೂರು/ಶಿವಮೊಗ್ಗ ಜ.19: ಶಿವಮೊಗ್ಗ ಪ್ರೆಸ್ ಟ್ರಸ್ಟ್‌ ಆಯೋಜಿಸಿದ್ದ ಅಂತರಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಬಹುಮಾನ ಪಡೆದಿದೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಹಾಗೂ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ಫೈನಲ್‌ಗೆ ತಲುಪಿದ್ದವು. ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಗೆದ್ದು…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ – ರಾಜ್ಯಮಟ್ಟದ ಕವನ,ಕಥಾಸ್ಪರ್ಧೆ

ಬೆಳ್ಳಿ ಮಹೋತ್ಸವ-2026ರ ಮಾಧ್ಯಮಗೋಷ್ಠಿಯ ಮಾಹಿತಿ ಆತ್ಮೀಯ ಮಾಧ್ಯಮ ಮಿತ್ರರೇ, ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ರಾಯಚೂರು ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪತ್ರಕರ್ತರಿಗಾಗಿ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಕಥೆ, ಕವನ, ಲೇಖನಗಳನ್ನ ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ. ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆ ಹಾಗೂ ರಾಯಚೂರು ಜಿಲ್ಲಾ ಪತ್ರಕರ್ತರಿಂದ ವೃತ್ತಿ ಅನುಭವದ ಲೇಖನಗಳ ಆಹ್ವಾನ ಮಾಡಲಾಗಿದೆ. ಕವನ, ಕಥೆ,…

ರಾಯಚೂರು ಜಿಲ್ಲಾ ಉತ್ಸವ ಮುಂದೂಡಿಕೆ

ರಾಯಚೂರು: ಜನವರಿ‌ 29, 30 ಮತ್ತು 31 ರಂದು ನಿಗದಿಯಾಗಿದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವನ್ನ ಫೆಬ್ರವರಿ 6,7 ಮತ್ತು 8 ಕ್ಕೆ ಮುಂದೂಡಲಾಗಿದೆ. ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ಹಿನ್ನೆಲೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.

ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಕ್ಯಾಲೆಂಡರ್-2026 ಬಿಡುಗಡೆ

ರಾಯಚೂರು ಜ.15: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ವಾರ್ಷಿಕ ಕ್ಯಾಲೆಂಡರ್-2026 ನ್ನ ಹಿರಿಯ ಪತ್ರಕರ್ತ ಹಾಗೂ ಗಿಲ್ಡ್ ನ ಮಾಜಿ ಅಧ್ಯಕ್ಷರಾದ ಸುರೇಂದ್ರಾಚಾರ್ಯ ಕೊರ್ತಕುಂದ ಮತ್ತು ಹಿರಿಯ ಪತ್ರಕರ್ತ ಹಾಗೂ ಗಿಲ್ಡ್‌ನ ಸಂಸ್ಥಾಪಕ ಸದಸ್ಯರಾದ ರಘುನಾಥ ರೆಡ್ಡಿ ಮನ್ಸಲಾಪುರ ಅವರು ಬಿಡುಗಡೆಗೊಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಉಪಾಧ್ಯಕ್ಷ ಎಂ. ಜಯರಾಮ ವಹಿಸಿದ್ದರು. ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ…

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ರ ಪೂರ್ವಭಾವಿ ಸಭೆ

ರಾಯಚೂರು ಜ.8. : ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ರ ಪೂರ್ವಭಾವಿ ಸಭೆಯನ್ನು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಸಲಾಯಿತು. ಸಾಹಿತಿಗಳು, ಪತ್ರಕರ್ತರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ವ್ಯಾಪಾರಸ್ಥರು, ಬುದ್ದಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರು ಸಭೆಯಲ್ಲಿ ಜಿಲ್ಲಾ ಉತ್ಸವ ಯಶಸ್ಸಿಗೆ ಸಲಹೆ ನೀಡಿದರು. ಜಿಲ್ಲಾಧಿಕಾರಿ ನಿತೀಶ್ ಕೆ. ,ಮಹಾನಗರ ಪಾಲಿಕೆ ಪೌರಾಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ,ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಸೇರಿ…

ರಾಯಚೂರು ಉತ್ಸವ: ಎರಡು ದಿನಗಳ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ರಾಯಚೂರು ಜ. 08: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಹಿನ್ನೆಲೆ ಜನವರಿ 08 ಮತ್ತು ಜನವರಿ 9ರಂದು ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಚಾಲನೆ ನೀಡಿದರು. ಪುರುಷರಿಗೆ ಪುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್ ಇತರೆ ಗುಂಪು ಕ್ರೀಡೆಗಳು ಹಾಗೂ ವೈಯಕ್ತಿಕ ಕ್ರೀಡೆಗಳಾದ ಚೆಸ್, ಓಟ, ಈಜು, ಗುಂಡು ಎಸೆತ ಸೇರಿದಂತೆ ಇತರ…

ರಾಯಚೂರು ಜಿಲ್ಲಾ ಕ್ರೀಡೋತ್ಸವಕ್ಕೆ ಚಾಲನೆ

ರಾಯಚೂರು ಜಿಲ್ಲಾಡಳಿತದಿಂದ ಜನವರಿ 29, 30 ,31ರಂದು ಮೂರು ದಿನ ಕಾಲ ರಾಯಚೂರು ಜಿಲ್ಲಾ ಉತ್ಸವ ಹಮ್ಮಿಕೊಳ್ಳಲಾಗಿದೆ.‌ ಜಿಲ್ಲಾ ಉತ್ಸವದ ಅಂಗವಾಗಿ ಕ್ರೀಡೋತ್ಸವದ ಮೊದಲ ಕ್ರಿಕೆಟ್ ಪಂದ್ಯಕ್ಕೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜು ಚಾಲನೆ ನೀಡಿದರು. ರಾಯಚೂರು ಉತ್ಸವದ ಪ್ರಚಾರಾರ್ಥ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತರ ಇಲಾಖೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
Raichur Reporters Guild

ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಬಂಡವಾಳ ಶಾಹಿಗಳಿಂರ ಮಾಧ್ಯಮ ಖರೀದಿ, ನಿರ್ಭೀತಿ ವರದಿ ಕಷ್ಟ- ಎನ್ ಎಸ್ ಬೋಸರಾಜು ರಾಯಚೂರು, ಡಿ.28- ದೇಶ ಮತ್ತು ವಿದೇಶದ ಯಾವುದೇ ಕಾರ್ಪೊರೇಟ್ ವಲಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರ ಖರೀದಿಸಿದ್ದು ಹಿಂದಿನಂತೆ ಪತ್ರಕರ್ತರು ಮುಕ್ತವಾಗಿ ಬರೆದು ಪಾವಿತ್ರತೆ ಉಳಿಸುವ ಅಗತ್ಯವಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಹೇಳಿದರು. ಅವರಿಂದು ನಗರದ ರಾಯಚೂರು ರಿಪೋರ್ಟರ್ ಪತ್ರಕರ್ತರ ಗಿಲ್ಡ್ ಸಭಾಂಗಣದಲ್ಲಿ…

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ,

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ- ಪುರುರಾಜ ಸಿಂಗ್ ಸೋಲಂಕಿ. ರಾಯಚೂರು,ಡಿ.25- ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ ಸಾಧ್ಯವೆಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರುರಾಜ ಸಿಂಗ್ ಸೋಲಂಕಿ ಹೇಳಿದರು. ಅವರಿಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ರಿಪೋರ್ಟ್ಸ್ ಗಿಲ್ಡ್ ಹಾಗು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ…
Raichur Reporters Guild

ರಾಯಚೂರು ರಿಪೋಟರ‍್ಸ್ ಗಿಲ್ಡ್ ನಿಂದ ಡಿಸೆಂಬರ್ 28ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಪತ್ರಿಕಾ ಪ್ರಕಟಣೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ರಾಯಚೂರು ರಿಪೋರ್ಟರ್‌ಸ್‌ ಗಿಲ್‌ಡ್‌ ರಾಯಚೂರು (ರಿ) ರಾಯಚೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 28-12-2025ರಂದು ಬೆಳಿಗ್ಗೆ 10:30 ಕ್ಕೆ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ…