ಪತ್ರಕರ್ತರ ತುರ್ತು ನಿಧಿ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ರಕ್ತದಾನ ಮೂಲಕ ಅರ್ಥಪೂರ್ಣ ಆಚರಣೆ- ಎ.ವಂಸತ ಕುಮಾರ

  • Home
  • ಆರೋಗ್ಯ ಶಿಬಿರಗಳು
  • ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ರಕ್ತದಾನ ಮೂಲಕ ಅರ್ಥಪೂರ್ಣ ಆಚರಣೆ- ಎ.ವಂಸತ ಕುಮಾರ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ರಕ್ತದಾನ ಮೂಲಕ ಅರ್ಥಪೂರ್ಣ ಆಚರಣೆ- ಎ.ವಂಸತ ಕುಮಾರ

– ಇಂದು ತಾಯಿಗೆ ಪರ್ಯಾಯವಾಗಿ ಬಾಡಿಗೆ ತಾಯಿ ಸಿಗಬಹುದು ರಕ್ತಕ್ಕೆ ಪರ್ಯಾಯವಿಲ್ಲ: ಶಾಸಕ ಡಾ.ಶಿವರಾಜ್ ಪಾಟೀಲ್

ರಾಯಚೂರು,ಅ.09- ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತನ್ನ ಬೆಳ್ಳಿ ಮಹೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವ ಅವಕಾಶಗಳಿದ್ದರೂ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ರಕ್ತದಾನದಂತ ಸಾಮಾಜಿಕ ಕೆಲಸದ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ಅಂತ ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ್ ಹೇಳಿದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ರೋಟರಿ ಜನಸೇವಾ ಪ್ರತಿಷ್ಠಾನ ರಕ್ತ ಕೇಂದ್ರ ಸಹಯೋಗದಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ವಿಧಾನ ಪರಿಷತ್ ಶಾಸಕ ಎ. ವಸಂತಕುಮಾರ, ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಎ.ವಸಂತಕುಮಾರ ಅಪಾಯದಲ್ಲಿರುವವರಿಗೆ ಈ ರಕ್ತದಾನ ಶಿಬಿರ ಅನುಕೂಲವಾಗಲಿದೆ ಎಂದರು. ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಬೆಳ್ಳಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದ್ದು ಆಧುನಿಕ ಯುಗದಲ್ಲಿ ರಕ್ತದಾನವು ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ರಕ್ತದಾನದ ಅನಿವಾರ್ಯತೆ ಮತ್ತು ಸವಾಲುಗಳು ನಮ್ಮ ಮುಂದಿದೆ. ಇಂದಿನ ಕಾಲದಲ್ಲಿ ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ, ಆದರೆ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಿಂದೆ ತಾಯಿ ಸಿಗಲಿಲ್ಲ ಎಂದರೆ ನೈಸರ್ಗಿಕ ತಾಯಿಯ ಪ್ರೀತಿ ಸಿಗುತ್ತಿರಲಿಲ್ಲ. ಆದರೆ ಇಂದು ಅಸಹಜ ಪರಿಸ್ಥಿತಿಯಲ್ಲಿ ಬಾಡಿಗೆ ತಾಯಿ ಪರಿಕಲ್ಪನೆ ಬಂದಿದೆ. ಆದರೆ ರಕ್ತಕ್ಕೆ ಮಾತ್ರ ಯಾವುದೇ ಕೃತಕ ಪರ್ಯಾಯವಿಲ್ಲ. ರಕ್ತದ ಘಟಕಗಳಾದ ಪ್ಲೇಟ್‌ಲೆಟ್ಸ್, ಫ್ರೆಶ್ ಫ್ರೋಜನ್ ಪ್ಲಾಸ್ಮಾ, ರೆಡ್ ಬ್ಲಡ್ ಸೆಲ್ಸ್ ಮುಂತಾದವುಗಳ ಬಳಕೆ ಮತ್ತು ಸಂರಕ್ಷಣೆ ಇಂದು ಅತ್ಯಂತ ಅವಶ್ಯಕವಾಗಿದೆ ಎಂದರು.

ರಾಯಚೂರಿನಲ್ಲಿ ರಕ್ತದ ಘಟಕಗಳ ಲಭ್ಯತೆ ಸ್ವಲ್ಪ ಕಡಿಮೆಯಿದ್ದು, ಬಾಂಬೆ ಹಾಗೂ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ರಕ್ತಕ್ಕಾಗಿ ಪಡುತ್ತಿರುವ ಪಾಡು ಕಷ್ಟಕರ ವಾಗಿದೆ. ಈ ಹಿಂದೆ ತೀವ್ರ ರಕ್ತಸ್ರಾವದ ಗರ್ಭಿಣಿ ಮಹಿಳೆಯೊಬ್ಬರ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನಿಮಿಷಕ್ಕೊಂದರಂತೆ ರಕ್ತದ ಬಾಟಲಿಗಳನ್ನು ಸರಬರಾಜು ಮಾಡಬೇಕಾದ ಪ್ರಸಂಗವನ್ನು ನೆನಪಿಸಿಕೊಳ್ಳುತ್ತ ರಕ್ತದಾನ ಎಷ್ಟು ಜೀವನ್ಮರಣದ ಪ್ರಶ್ನೆಯಾಗಿದೆ ಎಂಬುದನ್ನು ತಿಳಿಸಿದರು. ಇಂತಹ ಉತ್ತಮ ಹಾಗೂ ಜೀವ ಉಳಿಸುವ ಕಲ್ಯಾಣ ಕಾರ್ಯಗಳನ್ನು ಮಾಡುವ ಮೂಲಕ ರೋಗಿಗಳ ಸಂಕಷ್ಟಕ್ಕೆ ರೋಟರಿ ಸಂಸ್ಥೆ ಸ್ಪಂದಿಸುತ್ತಿದೆ. ರೋಟರಿ ಸಂಸ್ಥೆ ಜೊತೆ ರಿಪೋರ್ಟರ್ಸ್ ಗಿಲ್ಡ್ ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ರೋಟರಿ ಕ್ಲಬ್ ಜಿಲ್ಲಾ ಗೌರ್ನರ್ ತ್ರಿವಿಕ್ರಮ್ ಜೋಶಿ ಮಾತನಾಡಿ, ಅಗತ್ಯ ಇರುವ ರಕ್ತ ಸಿಗುತ್ತಿಲ್ಲ,ದಾನಿಗಳಿಲ್ಲ. ಹೊಸಪೇಟೆ ಬೆಂಗಳೂರಿಂದ ರಕ್ತ ಶೇಖರಣೆ ಮಾಡಿದ್ದೇವೆ ಎಂದರು. ರಕ್ತದಾನ ಮಾಡುವವರು ಮನಸ್ಸು ಮಾಡಬೇಕು. ರಕ್ತದಿಂದ ನೂರಾರು ಉಪಯೋಗ ಇದೆ. ನಿಮ್ಮ ಗಿಲ್ಡ್ ಉತ್ತಮ ಕೆಲಸದ ಮೂಲಕ ಅರ್ಥಪೂರ್ಣವಾಗಿ ಬೆಳ್ಳಿಮಹೋತ್ಸವ ಆಚರಿಸಲಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಮಾತನಾಡಿ. ಬೆಳ್ಳಿಮಹೋತ್ಸವವನ್ನ ಅದ್ಧೂರಿಯಾಗಿ ಆಚರಿಸುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಗಿಲ್ಡ್ ಗೆ 25 ವರ್ಷ ಸಂದಿದ್ದು ಇದು ನಮಗಷ್ಟೆ ಅಲ್ಲ ಸಾರ್ವಜನಿಕರ ಸಂಸ್ಥೆಯಾಗಿದ್ದು ಎಲ್ಲರೂ ಸೇರಿ ಬೆಳ್ಳಿಮಹೋತ್ಸವ ಆಚರಿಸೋಣ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು. ಅಕ್ಟೋಬರ್ 30ರಂದು ಬೆಳ್ಳಿ ಮಹೋತ್ಸವ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ರೋಟರಿ ಸಂಸ್ಥೆ ಜಿಲ್ಲಾ ಅಧ್ಯಕ್ಷ ರಾಮರಾವ್ ಗಣೇಕಲ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕನೂರು, ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರು, ವಿವಿಧ ಕ್ಷೇತ್ರಗಳ ಮುಖಂಡರು ಹಾಜರಿದ್ದರು.

ಇದಕ್ಕೂ ಮುನ್ನ ಎ.ವಸಂತ ಕುಮಾರ್ ಹಾಗು ಡಾ.ಶಿವರಾಜ್ ಪಾಟೀಲ್ ಪತ್ರಿಕಾ ಭವನ ಆಧುನೀಕರಣ ಕಾಮಗಾರಿಯನ್ನ ವೀಕ್ಷಿಸಿದರು.

ಹಂಚಿಕೊಳ್ಳಿ:

Leave A Comment