ಪತ್ರಕರ್ತರ ತುರ್ತು ನಿಧಿ

ಇತರೆ ಕಾರ್ಯಕ್ರಮಗಳು

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ಫಲಿತಾಂಶ ಪ್ರಕಟ

– ಕಥಾ ವಿಭಾಗದಲ್ಲಿ ಕೆ.ಪಿ.ಓಂಕಾರಮೂರ್ತಿ ಅವರ ‘ಡೆಡ್‌ಲೈನ್‌’ಗೆ ಪ್ರಥಮ ಸ್ಥಾನ – ಕವನ ವಿಭಾಗದಲ್ಲಿ ಶ್ರೀನಿವಾಸ ಎಂ ಅವರ ‘ಮುಸ್ಸಂಜೆಯ ಕಥೆಗಳು’ ಪ್ರಥಮ ರಾಯಚೂರು, ಜೂ.29: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತರ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ಫಲಿತಾಂಶ ಬಂದಿದ್ದು ರಾಯಚೂರು ಜಿಲ್ಲೆಯ ನಾಲ್ವರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ಅತ್ಯುತ್ತಮ ಕಥೆ, ಕವನಗಳು ಬಹುಮಾನ ಪಡೆದಿವೆ ಎಂದು ರಾಯಚೂರು…

ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್‌ನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುದಾನ ಮೀಸಲಿಡಲು ಮನವಿ

ರಾಯಚೂರು ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆ ರಾಯಚೂರು ನಗರದ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿ ಮಹಾನಗರ ಪಾಲಿಕೆ ಆಯುಕ್ತರು, ಆಡಳಿತಾಧಿಕಾರಿಗಳಾದ ಜುಬಿನ್ ಮೊಹಾಪಾತ್ರ ಅವರಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಈ ಹಿಂದಿನ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆ ಹಾಗೂ ಪೌರಾಯುಕ್ತರ ಉಪಸ್ಥಿತಿಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ…

ಹಿರಿಯ ಪತ್ರಕರ್ತ ದಿ. ಸೈಯದ್ ಅಶ್ರಫ್ ಕುಟುಂಬಕ್ಕೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಿಂದ 1 ಲಕ್ಷ ರೂ. ನೆರವು

ರಿಪೋರ್ಟರ‌್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ – ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ರಾಯಚೂರು, ಫೆ.16: ಇತ್ತೀಚೆಗೆ ನಿಧನರಾದ ರಾಯಚೂರಿನ ಹಿರಿಯ ಪತ್ರಕರ್ತ ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಪತ್ರಕರ್ತರ ತುರ್ತು ನಿಧಿಯಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು. ನಗರದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ‌ನ‌‌ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮೃತರ ಕುಟುಂಬಕ್ಕೆ 1 ಲಕ್ಷ…

ರಾಯಚೂರು ರಿಪೋರ್ಟರ‍್ಸ್ ಗಿಲ್ಡ್‌ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು ಜ20 : ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ ನನ್ನ ಅನುದಾನದಲ್ಲಿ 10 ಲಕ್ಷ ರೂ.ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯವಿದ್ದರೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ ಹೇಳಿದರು. ಅವರು ಇಂದು ನಗರದ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ಒಳಾಂಗಣ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿ ಮಾತನಾಡಿದರು. ಕಳೆದ…

ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ: ರಾಯಚೂರು ತಂಡಕ್ಕೆ ದ್ವಿತೀಯ ಸ್ಥಾನ

ರಾಯಚೂರು/ಶಿವಮೊಗ್ಗ ಜ.19: ಶಿವಮೊಗ್ಗ ಪ್ರೆಸ್ ಟ್ರಸ್ಟ್‌ ಆಯೋಜಿಸಿದ್ದ ಅಂತರಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಬಹುಮಾನ ಪಡೆದಿದೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಹಾಗೂ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ಫೈನಲ್‌ಗೆ ತಲುಪಿದ್ದವು. ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಗೆದ್ದು…

ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಕ್ಯಾಲೆಂಡರ್-2026 ಬಿಡುಗಡೆ

ರಾಯಚೂರು ಜ.15: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ವಾರ್ಷಿಕ ಕ್ಯಾಲೆಂಡರ್-2026 ನ್ನ ಹಿರಿಯ ಪತ್ರಕರ್ತ ಹಾಗೂ ಗಿಲ್ಡ್ ನ ಮಾಜಿ ಅಧ್ಯಕ್ಷರಾದ ಸುರೇಂದ್ರಾಚಾರ್ಯ ಕೊರ್ತಕುಂದ ಮತ್ತು ಹಿರಿಯ ಪತ್ರಕರ್ತ ಹಾಗೂ ಗಿಲ್ಡ್‌ನ ಸಂಸ್ಥಾಪಕ ಸದಸ್ಯರಾದ ರಘುನಾಥ ರೆಡ್ಡಿ ಮನ್ಸಲಾಪುರ ಅವರು ಬಿಡುಗಡೆಗೊಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಉಪಾಧ್ಯಕ್ಷ ಎಂ. ಜಯರಾಮ ವಹಿಸಿದ್ದರು. ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ…