ಪತ್ರಕರ್ತರ ತುರ್ತು ನಿಧಿ

ಗಿಲ್ಡ್ ವಿಶೇಷ ಕಾರ್ಯಕ್ರಮಗಳು

  • Home
  • Blog Standard
  • ಗಿಲ್ಡ್ ವಿಶೇಷ ಕಾರ್ಯಕ್ರಮಗಳು

ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್‌ನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುದಾನ ಮೀಸಲಿಡಲು ಮನವಿ

ರಾಯಚೂರು ಮಹಾನಗರ ಪಾಲಿಕೆ 2026-27 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆ ರಾಯಚೂರು ನಗರದ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ವಿಮೆ ಹಾಗೂ ತುರ್ತು ನಿಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿ ಮಹಾನಗರ ಪಾಲಿಕೆ ಆಯುಕ್ತರು, ಆಡಳಿತಾಧಿಕಾರಿಗಳಾದ ಜುಬಿನ್ ಮೊಹಾಪಾತ್ರ ಅವರಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಈ ಹಿಂದಿನ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆ ಹಾಗೂ ಪೌರಾಯುಕ್ತರ ಉಪಸ್ಥಿತಿಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ…

ಹಿರಿಯ ಪತ್ರಕರ್ತ ದಿ. ಸೈಯದ್ ಅಶ್ರಫ್ ಕುಟುಂಬಕ್ಕೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಿಂದ 1 ಲಕ್ಷ ರೂ. ನೆರವು

ರಿಪೋರ್ಟರ‌್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ – ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ರಾಯಚೂರು, ಫೆ.16: ಇತ್ತೀಚೆಗೆ ನಿಧನರಾದ ರಾಯಚೂರಿನ ಹಿರಿಯ ಪತ್ರಕರ್ತ ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಪತ್ರಕರ್ತರ ತುರ್ತು ನಿಧಿಯಿಂದ 1 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು. ನಗರದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ‌ನ‌‌ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮೃತರ ಕುಟುಂಬಕ್ಕೆ 1 ಲಕ್ಷ…

ರಾಯಚೂರು ರಿಪೋರ್ಟರ‍್ಸ್ ಗಿಲ್ಡ್‌ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು ಜ20 : ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ ನನ್ನ ಅನುದಾನದಲ್ಲಿ 10 ಲಕ್ಷ ರೂ.ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯವಿದ್ದರೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ ಹೇಳಿದರು. ಅವರು ಇಂದು ನಗರದ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ಒಳಾಂಗಣ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿ ಮಾತನಾಡಿದರು. ಕಳೆದ…

ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ: ರಾಯಚೂರು ತಂಡಕ್ಕೆ ದ್ವಿತೀಯ ಸ್ಥಾನ

ರಾಯಚೂರು/ಶಿವಮೊಗ್ಗ ಜ.19: ಶಿವಮೊಗ್ಗ ಪ್ರೆಸ್ ಟ್ರಸ್ಟ್‌ ಆಯೋಜಿಸಿದ್ದ ಅಂತರಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಬಹುಮಾನ ಪಡೆದಿದೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಹಾಗೂ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ಫೈನಲ್‌ಗೆ ತಲುಪಿದ್ದವು. ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಗೆದ್ದು…

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ – ರಾಜ್ಯಮಟ್ಟದ ಕವನ,ಕಥಾಸ್ಪರ್ಧೆ

ಬೆಳ್ಳಿ ಮಹೋತ್ಸವ-2026ರ ಮಾಧ್ಯಮಗೋಷ್ಠಿಯ ಮಾಹಿತಿ ಆತ್ಮೀಯ ಮಾಧ್ಯಮ ಮಿತ್ರರೇ, ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ರಾಯಚೂರು ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪತ್ರಕರ್ತರಿಗಾಗಿ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಕಥೆ, ಕವನ, ಲೇಖನಗಳನ್ನ ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ. ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆ ಹಾಗೂ ರಾಯಚೂರು ಜಿಲ್ಲಾ ಪತ್ರಕರ್ತರಿಂದ ವೃತ್ತಿ ಅನುಭವದ ಲೇಖನಗಳ ಆಹ್ವಾನ ಮಾಡಲಾಗಿದೆ. ಕವನ, ಕಥೆ,…

ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಕ್ಯಾಲೆಂಡರ್-2026 ಬಿಡುಗಡೆ

ರಾಯಚೂರು ಜ.15: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ವಾರ್ಷಿಕ ಕ್ಯಾಲೆಂಡರ್-2026 ನ್ನ ಹಿರಿಯ ಪತ್ರಕರ್ತ ಹಾಗೂ ಗಿಲ್ಡ್ ನ ಮಾಜಿ ಅಧ್ಯಕ್ಷರಾದ ಸುರೇಂದ್ರಾಚಾರ್ಯ ಕೊರ್ತಕುಂದ ಮತ್ತು ಹಿರಿಯ ಪತ್ರಕರ್ತ ಹಾಗೂ ಗಿಲ್ಡ್‌ನ ಸಂಸ್ಥಾಪಕ ಸದಸ್ಯರಾದ ರಘುನಾಥ ರೆಡ್ಡಿ ಮನ್ಸಲಾಪುರ ಅವರು ಬಿಡುಗಡೆಗೊಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಉಪಾಧ್ಯಕ್ಷ ಎಂ. ಜಯರಾಮ ವಹಿಸಿದ್ದರು. ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ…
Raichur Reporters Guild

ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಬಂಡವಾಳ ಶಾಹಿಗಳಿಂರ ಮಾಧ್ಯಮ ಖರೀದಿ, ನಿರ್ಭೀತಿ ವರದಿ ಕಷ್ಟ- ಎನ್ ಎಸ್ ಬೋಸರಾಜು ರಾಯಚೂರು, ಡಿ.28- ದೇಶ ಮತ್ತು ವಿದೇಶದ ಯಾವುದೇ ಕಾರ್ಪೊರೇಟ್ ವಲಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರ ಖರೀದಿಸಿದ್ದು ಹಿಂದಿನಂತೆ ಪತ್ರಕರ್ತರು ಮುಕ್ತವಾಗಿ ಬರೆದು ಪಾವಿತ್ರತೆ ಉಳಿಸುವ ಅಗತ್ಯವಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಹೇಳಿದರು. ಅವರಿಂದು ನಗರದ ರಾಯಚೂರು ರಿಪೋರ್ಟರ್ ಪತ್ರಕರ್ತರ ಗಿಲ್ಡ್ ಸಭಾಂಗಣದಲ್ಲಿ…