ಪತ್ರಿಕಾ ಭವನದಲ್ಲಿ ನಡೆದ ಸಂಪಾದಕರ ಸಭೆ ಯಶಸ್ವಿ

ರಾಯಚೂರು ಸೆ.19: ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಯಚೂರಿನ ಪತ್ರಿಕಾ ಭವನದಲ್ಲಿ ನಡೆದ ಸಂಪಾದಕರ ಸಭೆ ಯಶಸ್ವಿಯಾಗಿ ಜರುಗಿತು.
ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಂಪಾದಕರ ಸಭೆಯಲ್ಲಿ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಬೆಳ್ಳಿ ಮಹೋತ್ಸವ ಸಮಾರಂಭದ ಯಶಸ್ವಿಗೆ ಸಂಪಾದಕರು ಸಲಹೆ ಸೂಚನೆ ನೀಡುವಂತೆ ಕೋರಿದರು. ರಾಜ್ಯ ಮಟ್ಟದ ಕಥೆ ಕವನ, ಜಿಲ್ಲೆಯ ಪ್ರಮುಖ ಹೋರಾಟಗಳ ಕುರಿತ ಪುಸ್ತಕಗಳು ಹಾಗೂ ಸ್ಮರಣೆ ಸಂಚಿಕೆ ಹೊರತರುವ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಯಶಸ್ವಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಸಂಪಾದಕರಾದ ಸುಶೀಲೇಂದ್ರ ಸೋದೆಗಾರ, ಆರ್.ಗುರುನಾಥ್, ಚನ್ನಬಸವ ಬಾಗಲವಾಡ, ಶಿವಕುಮಾರ, ವಿಶ್ವನಾಥ ಸ್ವಾಮಿ, ವೀರಭದ್ರಪ್ಪ, ಮಹಾನಂದ, ಅಣ್ಣಪ್ಪ ಮೇಟಿಗೌಡ ಸೇರಿದಂತೆ ಹಲವರು ಸಮಾರಂಭ ಅರ್ಥಪೂರ್ಣ ವಾಗಿಸಲು ಸಲಹೆ ನೀಡಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ದಿನಪತ್ರಿಕೆಗಳ ಸಂಪಾದಕರುಗಳಾದ ಖಾನ್ ಸಾಬ್ ಮೋಮಿನ್, ಗಿರಿಧರ ಕುಲಕರ್ಣಿ, ಶಿವಮೂರ್ತಿ ಹಿರೇಮಠ, ಆನಂದ ವಿಕೆ, ,ಈರಪ್ಪ ಮಂಡಲಗೇರಾ, ಪ್ರಸನ್ನ ಜೈನ್, ಖ್ವಾಜಾ ಹುಸೇನ್,ಶ್ರೀನಿವಾಸ, ಗಿಲ್ಡ್ ಜಂಟಿ ಕಾರ್ಯದರ್ಶಿ ಶ್ರೀಕಾಂತ ಸಾವೂರು, ಸದಸ್ಯರುಗಳಾದ ಮಲ್ಲನಗೌಡ, ರಾಚಯ್ಯಸ್ವಾಮಿ, ಜಗನ್ನಾಥ ಪೂಜಾರಿ, ಭೀಮೇಶ ಪೂಜಾರ ಸೇರಿದಂತೆ ಹಲವರಿದ್ದರು.

