ರಾಯಚೂರು ಜ.15: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ವಾರ್ಷಿಕ ಕ್ಯಾಲೆಂಡರ್-2026 ನ್ನ ಹಿರಿಯ ಪತ್ರಕರ್ತ ಹಾಗೂ ಗಿಲ್ಡ್ ನ ಮಾಜಿ ಅಧ್ಯಕ್ಷರಾದ ಸುರೇಂದ್ರಾಚಾರ್ಯ ಕೊರ್ತಕುಂದ ಮತ್ತು ಹಿರಿಯ ಪತ್ರಕರ್ತ ಹಾಗೂ ಗಿಲ್ಡ್ನ ಸಂಸ್ಥಾಪಕ ಸದಸ್ಯರಾದ ರಘುನಾಥ ರೆಡ್ಡಿ ಮನ್ಸಲಾಪುರ ಅವರು ಬಿಡುಗಡೆಗೊಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಉಪಾಧ್ಯಕ್ಷ ಎಂ. ಜಯರಾಮ ವಹಿಸಿದ್ದರು. ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ ಚನ್ನಬಸವ ಬಾಗಲವಾಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಗಿಲ್ಡ್ನ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ್ ಸ್ವಾಗತಿಸಿದರು, ಹಿರಿಯ ಪತ್ರಕರ್ತ ಚಂದ್ರಕಾಂತ್ ಮಸಾನಿ ಪ್ರಾರ್ಥಿಸಿದರು. ಖಾಜಾಂಚಿ ಈರಣ್ಣ ಕರ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಸುರೇಂದ್ರಾಚಾರ್ಯ ಕೊರ್ತಕುಂದ ಅವರು ಪತ್ರಕರ್ತರ ತುರ್ತು ನಿಧಿ ಖಾತೆಗೆ 2000 ರೂ. ರಘುನಾಥ ರೆಡ್ಡಿ 500 ರೂ. ಅಂಬಣ್ಣ ಅರೋಲಿಕರ್ 1000 ರೂ, ಅಯ್ಯಪ್ಪ ಸ್ವಾಮಿ ಪಿಕಳಿಹಾಳ 1000 ರೂ. ಖಾನ್ ಸಾಬ್ ಮೊಮೀನ್ 500ರೂ. ಸಂಗಮೇಶ ವಸ್ತ್ರದ್ 500 ರೂ. ಹಾಗೂ ಇನ್ನಿತರ ಪತ್ರಕರ್ತರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ತುರ್ತು ನಿಧಿಗೆ ದೇಣಿಗೆ ನೀಡಿದರು.

