ಪತ್ರಕರ್ತರ ತುರ್ತು ನಿಧಿ

ರಾಯಚೂರು ಉತ್ಸವ: ಎರಡು ದಿನಗಳ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ರಾಯಚೂರು ಉತ್ಸವ: ಎರಡು ದಿನಗಳ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ರಾಯಚೂರು ಜ. 08: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಹಿನ್ನೆಲೆ ಜನವರಿ 08 ಮತ್ತು ಜನವರಿ 9ರಂದು ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಚಾಲನೆ ನೀಡಿದರು. ಪುರುಷರಿಗೆ ಪುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್ ಇತರೆ ಗುಂಪು ಕ್ರೀಡೆಗಳು ಹಾಗೂ ವೈಯಕ್ತಿಕ ಕ್ರೀಡೆಗಳಾದ ಚೆಸ್, ಓಟ, ಈಜು, ಗುಂಡು ಎಸೆತ ಸೇರಿದಂತೆ ಇತರ ಕ್ರೀಡೆಗಳು ಹಾಗೂ ಮಹಿಳೆಯರಿಗೆ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಇತರೆ ಗುಂಪು ಕ್ರೀಡೆಗಳ ಜೊತೆಗೆ ವೈಯಕ್ತಿಕ ಕ್ರೀಡೆಗಳಾದ ಚೆಸ್, ರನ್ನಿಂಗ್, ಈಜು, ಗುಂಡು ಎಸೆತ ಸೇರಿದಂತೆ ಇತರೆ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯಿಂದ ಒಟ್ಟು 1266 ನೌಕರರು ಕ್ರೀಡಾಕೂಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ ಅವರು ತಿಳಿಸಿದ್ದಾರೆ.

ಹಂಚಿಕೊಳ್ಳಿ:

Leave A Comment