ಪತ್ರಕರ್ತರ ತುರ್ತು ನಿಧಿ

ರಾಯಚೂರು ರಿಪೋಟರ‍್ಸ್ ಗಿಲ್ಡ್ ನಿಂದ ಡಿಸೆಂಬರ್ 28ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

ರಾಯಚೂರು ರಿಪೋಟರ‍್ಸ್ ಗಿಲ್ಡ್ ನಿಂದ ಡಿಸೆಂಬರ್ 28ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

ಪತ್ರಿಕಾ ಪ್ರಕಟಣೆ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ರಾಯಚೂರು ರಿಪೋರ್ಟರ್‌ಸ್‌ ಗಿಲ್‌ಡ್‌ ರಾಯಚೂರು (ರಿ) ರಾಯಚೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 28-12-2025ರಂದು ಬೆಳಿಗ್ಗೆ 10:30 ಕ್ಕೆ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಶ್ರೀ ಎನ್.ಎಸ್ ಬೋಸರಾಜು, ಮಾನ್ಯ ಸಣ್ಣ ನೀರಾವರಿ ಹಾಗೂ ಜ್ಞಾನ ಮತ್ತು ತಂತ್ರಜ್ಞಾಾನ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ ಇವರು ಉದ್ಘಾಾಟಿಸಲಿದ್ದಾರೆ. ಪತ್ರಕರ್ತರ ತುರ್ತುನಿಧಿಗೆ ವಿಧಾನ ಪರಿಷತ್ ಶಾಸಕರಾದ ಶ್ರೀ .ಎ. ವಸಂತಕುಮಾರ ಚಾಲನೆ ನೀಡುವರು. ಸಂಸದರಾದ ಶ್ರೀ ಜಿ.ಕುಮಾರ ನಾಯಕ ಅವರು ರಾಯಚೂರು ರಿಪೋರ್ಟರ್‌ಸ್‌ ಗಿಲ್ಡ್‌ ನ ವೆಬ್‌ಸೈಟ್‌ ಲೋಕಾರ್ಪಣೆ ಮಾಡುವರು.

ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌‌ನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ನಗರದ ಸಾಧಕ ಪತ್ರಕರ್ತರಿಗೆ ಶ್ರೀ .ಬಸನಗೌಡ ದದ್ದಲ್ ಮಾನ್ಯ ಅಧ್ಯಕ್ಷರು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಹಾಗೂ ಗ್ರಾಮಾಂತರ ಶಾಸಕರು ರಾಯಚೂರು. ಡಾ. ಎಸ್.ಶಿವರಾಜ ಪಾಟೀಲ್ ಮಾನ್ಯ ಶಾಸಕರು ರಾಯಚೂರು ಅವರು ಮಾಡಲಿದ್ದಾರೆ. ಪತ್ರಿಕಾ ವಿತರಕರಿಗೆ ಜರ್ಕಿನ್‌ಗಳನ್ನು ರಾಯಚೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಅವರು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಗನ್ನಾಥ ಆರ್ ದೇಸಾಯಿ , ಸ್ಥಾನಿಕ ಸಂಪಾದಕರು, ವಿಜಯವಾಣಿ ಗಂಗಾವತಿ ಆವೃತ್ತಿ. ನಿತೀಶ್.ಕೆ ಜಿಲ್ಲಾಧಿಕಾರಿಗಳು, ಈಶ್ವರ್‌ಕುಮಾರ ಕಾಂದೂ ಸಿಇಓ, ಜಿ.ಪಂ ರಾಯಚೂರು, ಜುಬಿನ್ ಮೊಹಪಾತ್ರ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ರಾಯಚೂರು. ಪುಟ್ಟಮಾದಯ್ಯ .ಎಂ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ,ರಾಯಚೂರು , ಡಾ.ಜಿ ಸುರೇಶ , ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರಕಾರ ಚನ್ನಬಸವ ಬಾಗಲವಾಡ , ಅಧ್ಯಕ್ಷರು, ಜಿಲ್ಲಾಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಇವರು ಭಾಗವಹಿಸಲಿದ್ದಾರೆ.

ಇದೇ ವೇಳೆ ಗಿಲ್ಡ್‌ ನ ಪ್ರತಿಷ್ಠಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನ ಶ್ರೀ ರಘುನಾಥರೆಡ್ಡಿ , ಹಿರಿಯ ಉಪಸಂಪಾದಕರು , ಪ್ರಜಾಪ್ರಸಿದ್ದ ದಿನಪತ್ರಿಕೆ ಇವರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. ಮಾಹಿತಿ ಆಯೋಗದ ಆಯುಕ್ತರಾಗಿರುವ ಬಿ.ವೆಂಕಟಸಿಂಗ್ ಅವರನ್ನು ವಿಶೇಷವಾಗಿ ಗಿಲ್ಡ್‌‌ನಿಂದ ಸನ್ಮಾನಿಸಲಾಗುತ್ತಿದೆ. ಅಲ್ಲದೆ, ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳಿಗೆ ಚಂದ್ರಕಾಂತ್ ಮಸಾನಿ. ಹಿರಿಯ ಪತ್ರಕರ್ತರು, ಪ್ರಜಾವಾಣಿ, ದಿನಪತ್ರಿಕೆ ರಾಯಚೂರು, ಅಬ್ದುಲ್ ಖಾದರ್. ಛಾಯಾಗ್ರಾಾಹಕರು , ಪವರ್‌ಟಿವಿ, ರಾಯಚೂರು, ಶ್ರೀನಿವಾಸ ಕೆ. ವರದಿಗಾರರು, ಅಮೋಘ ಕೇಬಲ್ ಚಾನೆಲ್, ರಾಯಚೂರು, ಬಿ. ರಾಜು. ವರದಿಗಾರರು , ಪ್ರಜಾಪ್ರಸಿದ್ದ ಪತ್ರಿಕೆ, ರಾಯಚೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಡಿ.25ರಂದು ಬೆಳಿಗ್ಗೆ ನಗರದ ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುತ್ತೇವೆ.

ಇಂತಿ ತಮ್ಮ ವಿಶ್ವಾಸಿ
ವಿಜಯಕುಮಾರ ಜಾಗಟಗಲ್
ಅಧ್ಯಕ್ಷರು, ಆರ್‌ಆರ್‌ಜಿ ರಾಯಚೂರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿರುವವರು:

ಚನ್ನಬಸವ ಬಾಗಲವಾಡ, ಅಧ್ಯಕ್ಷರು , ಜಿಲ್ಲಾಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಪಾದಕರ ಸಂಘ
ಎಂ.ಜಯರಾಮ್, ಉಪಾಧ್ಯಕ್ಷರು, ಆರ್‌ಆರ್‌ಜಿ ರಾಯಚೂರು,
ವೆಂಕಟೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಆರ್‌ಆರ್‌ಜಿ ರಾಯಚೂರು.
ಶ್ರೀಕಾಂತ್ ಸಾವೂರು, ಜಂಟಿ ಕಾರ್ಯದರ್ಶಿ ಆರ್‌ಆರ್‌ಜಿ ರಾಯಚೂರು.
ಖಾನ್‌ಸಾಬ್ ಮೊಮಿನ್, ಪ್ರಧಾನ ಕಾರ್ಯದರ್ಶಿ ಜಿಲ್ಲಾಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ
ರಾಯಚೂರು

ಹಂಚಿಕೊಳ್ಳಿ:

Leave A Comment