ರಘುನಾಥ ರೆಡ್ಡಿ ಮನ್ಸಲಾಪುರ
ಗಿಲ್ಡ್ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ
ರಘುನಾಥ ರೆಡ್ಡಿ ಮನ್ಸಲಾಪುರ : ಮೂಲತಃ ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದವರಾದ ರಘುನಾಥ ರೆಡ್ಡಿ ಮಾಧ್ಯಮ ಕ್ಷೇತ್ರದಲ್ಲಿ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸುದ್ದಿಮೂಲ, ರಾಯಚೂರು ವಾಣಿ ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2021 ರಿಂದ ಪ್ರಜಾ ಪ್ರಸಿದ್ದ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಇವರ ಲೇಖನ, ಅಂಕಣಗಳು ಪ್ರಕಟಗೊಂಡಿವೆ.
ಪತ್ರಕರ್ತರಾಗಿ ಮಾತ್ರವಲ್ಲದೆ ಸಾಹಿತಿಯೂ ಆಗಿರುವ ಶ್ರೀಯುತರು ‘ವಚನ ಜ್ಯೋತಿ’ ಎಂಬ ಆಧುನಿಕ ವಚನಗಳ ಕೃತಿಯನ್ನ ಹೊರತಂದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಶ್ರೀಯುತರ ಸುದೀರ್ಘ ಸೇವೆಯನ್ನ ಗುರುತಿಸಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ 2025 ನೇ ಸಾಲಿನ ಪ್ರತಿಷ್ಠಿತ “ಜೀವಮಾನ ಸಾಧನೆ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಬಿ.ವೆಂಕಟಸಿಂಗ್
ಗಿಲ್ಡ್ ವಿಶೇಷ ಸನ್ಮಾನ
ಮೂಲತ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದವರಾದ ಬಿ.ವೆಂಕಟಸಿಂಗ್ ಸತತ 38 ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಸುದ್ದಿಮೂಲ ದಿನಪತ್ರಿಕೆ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ, ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯರಾಗಿ, ಮಾಧ್ಯಮ ರಂಗದ ವಿವಿಧ ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಸಂಸ್ಥಾಪಕ ಸದಸ್ಯರಾಗಿ ನಂತರ ಅಧ್ಯಕ್ಷರಾಗಿ ಗಿಲ್ಡ್ನ್ನ ಕಟ್ಟುವಲ್ಲಿ ಇನ್ನಿತರ ಪತ್ರಕರ್ತರೊಂದಿಗೆ ಶ್ರಮಿಸಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತರಾಗಿರುವ ಹಿನ್ನೆಲೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ಶ್ರೀಯುತರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಚಂದ್ರಕಾಂತ ಮಸಾನಿ
ದಿ.ದಿದ್ಗಿ ಕಿಶನರಾವ್ ಸ್ಮರಣಾರ್ಥ ಹಾಗೂ ದಿ.ಹನುಮಂತ್ರಾಯ ಗೌಡ ಗೌರವಾರ್ಥ ಗ್ರಾಮೀಣ/ನಗರ ಅತ್ಯುತ್ತಮ ವರದಿಗಾರಿಕೆಗೆ ನೀಡುವ ದತ್ತಿ ಪ್ರಶಸ್ತಿ
ಮೂಲತ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯವರಾದ
ಶ್ರೀಯುತ ಚಂದ್ರಕಾಂತ ಮಸಾನಿ ಕಳೆದ 19 ವರ್ಷಗಳಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಒಟ್ಟು 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಕನ್ನಡ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ಬೀದರ್ನಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಪ್ರಜಾವಾಣಿಯ ರಾಯಚೂರು ಜಿಲ್ಲೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಶ್ರೀಯುತರ ಅಮೋಘ ಸೇವೆಯನ್ನ ಗುರುತಿಸಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ಕೊಡಮಾಡುವ
ದಿ.ದಿದ್ಗಿ ಕಿಶನ್ರಾವ್ ಸ್ಮರಣಾರ್ಥ ಹಾಗೂ ದಿ.ಹನುಮಂತ್ರಾಯ ಗೌಡ ಗೌರವಾರ್ಥ ಗ್ರಾಮೀಣ/ನಗರ ಅತ್ಯುತ್ತಮ ವರದಿಗಾರಿಕೆಗೆ ನೀಡುವ ದತ್ತಿ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.
ಅಬ್ದುಲ್ ಖಾದರ್
ದಿ.ರಘುನಾಥ್ ಸಿಂಗ್ ಬೊಮ್ಮನಾಳ ಸ್ಮರಣಾರ್ಥ ಹಾಗೂ ಪ್ರಕಾಶ್ ಮಸ್ಕಿ ಪ್ರಾಯೋಜಿತ ಅತ್ಯುತ್ತಮ ಛಾಯಾಗ್ರಾಹಕ ದತ್ತಿ ಪ್ರಶಸ್ತಿ
ಶ್ರೀಯುತ ಅಬ್ದುಲ್ ಖಾದರ್ ಖಾಜಿ ತಂದೆ ಆದಮ್ ಸಾಬ್ ಖಾಜಿ ವಿಡಿಯೋ ಜರ್ನಲಿಸ್ಟಾಗಿ ರಾಯಚೂರು ಜಿಲ್ಲೆಯಲ್ಲಿ ಸತತ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.1998 ರಲ್ಲಿ ಮೇಘ ಲೋಕಲ್ ಚಾನಲ್ ನಿಂದ ವೃತ್ತಿ ಪ್ರಾರಂಭಿಸಿದರು.
ನಂತರ 2007 ರಿಂದ ಕಸ್ತೂರಿ ನ್ಯೂಸ್ ಚಾನಲ್ ನಲ್ಲಿ 10 ವರ್ಷ ಸೇವೆ, ಪ್ರಜಾಟಿವಿಯಲ್ಲಿ 7 ವರ್ಷ ಕಾರ್ಯ ನಿರ್ವಹಿಸಿ ಸದ್ಯ ಪವರ್ ಟಿವಿಯಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಶ್ರೀಯುತರ ಅಮೋಘ ಸೇವೆಯನ್ನ ಗುರುತಿಸಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ಕೊಡಮಾಡುವ ದಿ.ರಘುನಾಥ್ ಸಿಂಗ್ ಬೊಮ್ಮನಾಳ ಸ್ಮರಣಾರ್ಥ ಹಾಗೂ ಪ್ರಕಾಶ್ ಮಸ್ಕಿ ಪ್ರಾಯೋಜಿತ ಅತ್ಯುತ್ತಮ ಛಾಯಾಗ್ರಾಹಕ
ದತ್ತಿ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.
ಶ್ರೀನಿವಾಸ್ ಕೆ.
ಕೆ.ಅಡಿವೆಪ್ಪ ಸ್ಮಾರಕ ಪ್ರಶಸ್ತಿ
ಶ್ರೀಯುತ ಶ್ರೀನಿವಾಸ್ ಕೆ. ತಂದೆ ಯಂಕಣ್ಣ ವಿಡಿಯೋ ಜರ್ನಲಿಸ್ಟಾಗಿ ರಾಯಚೂರು ಜಿಲ್ಲೆಯಲ್ಲಿ ಸತತ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2004 ರಲ್ಲಿ ಪದ್ಮಶ್ರೀ ಕೇಬಲ್ ಚಾನಲ್ ನಿಂದ ವೃತ್ತಿ ಪ್ರಾರಂಭಿಸಿದರು.
ನಂತರ 2008 ರಿಂದ ಅಮೋಘ ಕೇಬಲ್ ಚಾನಲ್ ನಲ್ಲಿ ವೃತ್ತಿ ಮುಂದುವರೆಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಶ್ರೀಯುತರ ಅಮೋಘ ಸೇವೆಯನ್ನ ಗುರುತಿಸಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ಕೊಡಮಾಡುವ
ಕೆ.ಅಡಿವೆಪ್ಪ ಸ್ಮಾರಕ ಕೆ.ಸತ್ಯನಾರಾಯಣ ಪ್ರಾಯೋಜಿತ
ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರಾಜು.ಬಿ
ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಅತ್ಯುತ್ತಮ ವರದಿಗಾರ ದತ್ತಿ ಪ್ರಶಸ್ತಿ
ಶ್ರೀಯುತ ರಾಜು ಬಿ ತಂದೆ ಭೋಜರಾಜು ರಾಯಚೂರು ಜಿಲ್ಲೆಯಲ್ಲಿ ಸತತ 12 ವರ್ಷಗಳಿಂದ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಲ್ಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಜು ಬಿ. ಬೆಂಕಿ ಬೆಳಕು ಪತ್ರಿಕೆಯಲ್ಲಿ 4 ವರ್ಷ, ಸಂಜೆ ವಾಣಿ ಯಲ್ಲಿ 4 ವರ್ಷ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2022 ರಿಂದ ಪ್ರಜಾಪ್ರಸಿದ್ದ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಶ್ರೀಯುತರ ಅಮೋಘ ಸೇವೆಯನ್ನ ಗುರುತಿಸಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ಕೊಡಮಾಡುವ ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಅತ್ಯುತ್ತಮ ವರದಿಗಾರ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
