ಪತ್ರಕರ್ತರ ತುರ್ತು ನಿಧಿ

ಶ್ರೀ ಖಾನ್ ಸಾಬ್ ಮೊಮಿನ್

  • Home
  • ಶ್ರೀ ಖಾನ್ ಸಾಬ್ ಮೊಮಿನ್
ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಖಾನ್ ಸಾಬ್ ಮೊಮಿನ್

ಈಶಾನ್ಯ ವಾರ್ತೆ ಕನ್ನಡ ದಿನಪತ್ರಿಕೆ ಸಂಪಾದಕರಾದ ಖಾನ್ ಸಾಬ್ ಮೋಮಿನ್ ಮೂಲತಃ ರಾಯಚೂರಿನ ಲಿಂಗಸುಗೂರು ತಾಲೂಕಿನ ಗುಂಡಸಾಗರ ಗ್ರಾಮದವರು. ಕಳೆದ 24 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿವಮೊಗ್ಗದ ಕುವೆಂಪು ವಿವಿಯಿಂದ ಎಂ.ಎ. ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2001ನೇ ಇಸ್ವಿಯಲ್ಲಿ ಸುದ್ದಿಮೂಲ ಪತ್ರಿಕೆಯಿಂದ ವರದಿಗಾರರಾಗಿ ವೃತ್ತಿ ಆರಂಭಿಸಿದ್ದಾರೆ. ಬಳಿಕ ವಿಜಯ ಕರ್ನಾಟಕ ದಿನಪತ್ರಿಕೆಯ ಶಕ್ತಿನಗರ ವರದಿಗಾರರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. 2006 ರಿಂದ 2014 ರವರೆಗೆ ಈಶಾನ್ಯ ಟೈಮ್ಸ್ ದಿನಪತ್ರಿಕೆಯಲ್ಲಿ ರಾಯಚೂರು ಜಿಲ್ಲಾ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

2014 ಆಗಸ್ಟ್ 15 ರಂದು ಸ್ವಂತ ದಿನ ಪತ್ರಿಕೆ ಈಶಾನ್ಯ ವಾರ್ತೆಯನ್ನ ಆರಂಭಿಸಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ ಮಾತ್ರವಲ್ಲದೆ ಸಾಹಿತಿ, ಕವಿಗಳಾಗಿ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರ ಕವಿತೆಗಳು, ಲೇಖನಗಳು ವಿವಿಧ ಪತ್ರಿಕೆ ಹಾಗೂ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದಾರೆ.

Contact : 7022265311

Email ID : eshanyavarte@gmail.com

Follow ಶ್ರೀ ಖಾನ್ ಸಾಬ್ ಮೊಮಿನ್ :