ಪತ್ರಕರ್ತರ ತುರ್ತು ನಿಧಿ

ಶ್ರೀ ಕೆ. ಸತ್ಯನಾರಾಯಣ

  • Home
  • ಶ್ರೀ ಕೆ. ಸತ್ಯನಾರಾಯಣ
ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಕೆ. ಸತ್ಯನಾರಾಯಣ

ಕಲ್ಯಾಣ ಸತ್ಯ ಸಂಜೆ ಪತ್ರಿಕೆ ಪ್ರಧಾನ ವರದಿಗಾರರಾದ ಕೆ.ಸತ್ಯನಾರಾಯಣ ಮೂಲತಃ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದವರು.ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಪೂರೈಸಿದ್ದು, ಕಳೆದ
31 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1994 ರಲ್ಲಿ ನಿತ್ಯ ನೂತನ ದಿನಪತ್ರಿಕೆ ಮೂಲಕ ವರದಿಗಾರರಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು 1995 ರಿಂದ 2005 ರವರಿಗೆ ರಾಯಚೂರು ವಾಣಿ ಜಿಲ್ಲಾ ವರದಿಗಾರರಾಗಿ, 2006 ರಿಂದ 2007 ವರೆಗೆ ಉಷಾ ಕಿರಣ ರಾಜ್ಯ ಮಟ್ಟದ ದಿನ ಪತ್ರಿಕೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ 2022 ರವರಿಗೆ ಸಂಜೆವಾಣಿ ರಾಯಚೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮಧ್ಯೆ ಎರಡು ವರ್ಷ ಕಾವೇರಿ ಟಿವಿಯಲ್ಲಿ ವರದಿಗಾರನಾಗಿಯೂ ಟಿವಿ ಮಾಧ್ಯಮದಲ್ಲಿ ತೊಡಗಿದ್ದರು.

2022 ರಿಂದ ಕಲ್ಯಾಣ ಸತ್ಯ ಸಂಜೆ ಪತ್ರಿಕೆ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಗಿಲ್ಡ್‌ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Contact : 9986859891

Email ID : kalyanasatya22@gmail.com

Follow ಕೆ. ಸತ್ಯನಾರಾಯಣ