ಶ್ರೀ ಅಂಬಣ್ಣ ಅರೋಲಿಕರ್
ಜನಬಲ ಟೈಮ್ಸ್ ದಿನಪತ್ರಿಕೆ ಸಂಪಾದಕರಾದ ಅಂಬಣ್ಣ ಅರೋಲಿಕರ್ ಮೂಲತಃ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ್ದಾರೆ. 1985 ರಿಂದ ವಿದ್ಯಾರ್ಥಿ ಪರ ಹೋರಾಟಗಳ ಮೂಲಕ ಗುರುತಿಕೊಂಡಿದ್ದು, 2003 ರಿಂದ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.ರಾಯಚೂರು ಐಐಟಿ ಮಂಜೂರಾತಿ ಹೋರಾಟ, ಅಪೌಷ್ಟಿಕತೆ, ಗುಣಮಟ್ಟದ ಶಿಕ್ಷಣ, ಪ್ರಾದೇಶಿಕ ಅಸಮಾನತೆ ನಿವಾರಣೆ ಹಿನ್ನೆಲೆ 371 ಜೆ ಅನುಷ್ಠಾನಕ್ಕಾಗಿ ಹೋರಾಟ ಸೇರಿದಂತೆ ಹಲವಾರು ಹೋರಾಟಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ವಿವಿಧ ಪತ್ರಿಕೆಗಳಿಗೆ ಲೇಖನ, ಸಾಮಾಜಿಕ ಜಾಗೃತಿ ಗೀತೆಗಳ ರಚನೆ ಮತ್ತು ಗಾಯನ ಮೂಲಕ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. 2019 ರಲ್ಲಿ
ಜನಬಲ ಟೈಮ್ಸ್ ದಿನಪತ್ರಿಕೆ ಆರಂಭಿಸುವ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ 6 ವರೆ ವರ್ಷಗಳಿಂದ ಜನಬಲ ಟೈಮ್ಸ್ ದಿನಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Contact : 9448695537
Email ID : janabalatimes@gmail.com
