ಪತ್ರಕರ್ತರ ತುರ್ತು ನಿಧಿ

ಶ್ರೀ ಚೆನ್ನಬಸವಣ್ಣ

  • Home
  • ಶ್ರೀ ಚೆನ್ನಬಸವಣ್ಣ
https://raichurreportersguild.org/
ನಿಕಟಪೂರ್ವ ಅಧ್ಯಕ್ಷರು

ಶ್ರೀ ಚೆನ್ನಬಸವಣ್ಣ

ಮೂಲತಃ ರಾಯಚೂರು ತಾಲೂಕಿನ ಯರಮರಸ್ ಗ್ರಾಮದ ಚನ್ನಬಸವಣ್ಣ ಕಳೆದ 32 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಎ ಎಲ್‌ಎಲ್‌ಬಿ , ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚನ್ನಬಸವಣ್ಣ ಸುದ್ದಿ ಮೂಲ ದಿನಪತ್ರಿಕೆ ಮೂಲಕ ವೃತ್ತಿ ಆರಂಭಿಸಿ ಸೇವೆ ಮುಂದುವರೆಸಿದ್ದಾರೆ. ಸುದ್ದಿಮೂಲದ ಜೊತೆಯಲ್ಲಿಯೇ 22 ವರ್ಷ ಈ ಟಿವಿ ವಾಹಿನಿಯ ರಾಯಚೂರು ಜಿಲ್ಲಾ ವರದಿಗಾರನಾಗಿ ನಂತರ ನ್ಯೂಸ್ 18 ಯಾದಗಿರಿ ಜಿಲ್ಲೆ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಮಧ್ಯೆ ಸ್ಪಿಲ್ ಪತ್ರಿಕೋದ್ಯಮ ಪದವಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಜರ್ನಲಿಸಂ ಪಾಠ ಭೋದನೆ. ಪ್ರಸ್ತುತ ಸುದ್ದಿಮೂಲ ಮತ್ತು ಜನವಾದಿ ಪತ್ರಿಕೆಯಲ್ಲಿ ವೃತ್ತಿ ಮುಂದುವರೆಸಿದ್ದಾರೆ. ಪತ್ರಿಕೋದ್ಯಮದ ಜೊತೆ ಜೊತೆಗೆ ವಕೀಲ ವೃತ್ತಿಯನ್ನು ಮಾಡುತ್ತಿದ್ದಾರೆ. ಉಪನ್ಯಾಸಕರಾಗಿದ್ದಾಗ ಕಲಬುರ್ಗಿ ವಿಶ್ವ ವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ಪಠ್ಯ ರಚನೆ ಮತ್ತು ಪರೀಕ್ಷಾ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ನಿಕಟಪೂರ್ವ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

Contact : 9448300139

Email ID : chennuetv@gmail.com

Follow ಚೆನ್ನಬಸವಣ್ಣ :