ಪತ್ರಕರ್ತರ ತುರ್ತು ನಿಧಿ

About

ನಮ್ಮ ಬಗ್ಗೆ

ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರಾಯಚೂರು, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ 2000–01ರಲ್ಲಿ ನೋಂದಣಿಯಾಗಿದೆ.

ರಾಯಚೂರು ನಗರದ ಪತ್ರಕರ್ತರ ಕ್ಷೇಮಾಭಿವೃದ್ಧಿ, ಜ್ಞಾನ ಪ್ರಸರಣ, ಪತ್ರಕರ್ತರಿಗೆ ಸಾಮಾಜಿಕ, ಕ್ರೀಡೆ, ಮನೋರಂಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಮಾನ್ಯ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಸಂಸ್ಥೆ ಸ್ಥಾಪನೆಯಾಗಿದೆ.

2004ರಲ್ಲಿ ಗಿಲ್ಡ್ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಿಸಿದ್ದು, ಪತ್ರಿಕಾಗೋಷ್ಠಿಗಳನ್ನು ಕನಿಷ್ಠ ಶುಲ್ಕದಲ್ಲಿ ನಡೆಸಲು ಅವಕಾಶ ನೀಡಲಾಗಿದೆ.

ಕಾರ್ಯಾಗಾರ, ಸಂವಾದ, ಕ್ರೀಡಾಕೂಟ, ಸಾಮಾಜಿಕ ಚಟುವಟಿಕೆಗಳು, ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಪತ್ರಕರ್ತರಿಗೆ ವಿಮಾ ಸೌಲಭ್ಯ, ಆರೋಗ್ಯ ತಪಾಸಣೆ, ಗ್ರಂಥಾಲಯ ಹಾಗೂ ಮಕ್ಕಳಿಗಾಗಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

2025ರಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಸಂಕಷ್ಟದ ಸಮಯದಲ್ಲಿ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ.