ಪತ್ರಕರ್ತರ ತುರ್ತು ನಿಧಿ

ಆನಂದ ವಿ.ಕೆ.

  • Home
  • ಆನಂದ ವಿ.ಕೆ.
ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಆನಂದ ವಿ.ಕೆ.

ಸಮರ್ಥವಾಣಿ ದಿನಪತ್ರಿಕೆಯ ರಾಯಚೂರು ಸ್ಥಾನಿಕ ಸಂಪಾದಕರಾಗಿರುವ ಆನಂದ ವಿ.ಕೆ. ಕಳೆದ 28 ವರ್ಷ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಎ ಪದವೀಧರರಾಗಿರುವ ಆನಂದ ವಿ.ಕೆ. ಉಷಾಕಿರಣ ದಿನಪತ್ರಿಕೆಯ ಛಾಯಾಗ್ರಾಹಕರಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದರು. ಬಳಿಕ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಎರಡು ವರ್ಷ, ಕೆಪಿಎನ್‌ ನಲ್ಲಿ ಮೂರು ವರ್ಷ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಕೊಪ್ಪಳ ಜಿಲ್ಲೆಯಲ್ಲಿ ಕಸ್ತೂರಿ ಟಿವಿಯ ಕ್ಯಾಮೆರಾಮನ್ ಆಗಿ ಒಂದು ವರ್ಷ, ರಾಯಚೂರಿನಲ್ಲಿ ಜನಶ್ರೀ ವಾಹಿನಿಯ ಕ್ಯಾಮೆರಾಮನ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ 2009 ರಲ್ಲಿ ಸಮರ್ಥವಾಣಿ ದಿನ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಆಯ್ಕೆಯಾಗಿ ನಂತರದಲ್ಲಿ ಸ್ಥಾನಿಕ ಸಂಪಾದಕರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಸಂಯುಕ್ತ ಕರ್ನಾಟಕ ,ವಿಶ್ವವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದಾರೆ.

Contact : 9986070186

Email ID : kulkarniavk@gmail.com

Follow ಆನಂದ ವಿ.ಕೆ. :