ಪತ್ರಕರ್ತರ ತುರ್ತು ನಿಧಿ

ಶ್ರೀ ಮಲ್ಲನಗೌಡ ಪಾಟೀಲ್

  • Home
  • ಶ್ರೀ ಮಲ್ಲನಗೌಡ ಪಾಟೀಲ್
Mallikarjun Swamy Patil
ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಮಲ್ಲನಗೌಡ ಪಾಟೀಲ್

ಜನವಾದಿ ದಿನಪತ್ರಿಕೆ ಜಿಲ್ಲಾ ವರದಿಗಾರರಾಗಿರುವ ಮಲ್ಲನಗೌಡ ತಂದೆ ವೀರೇಶಪ್ಪಗೌಡ ಮೂಲತಃ ರಾಯಚೂರಿನ ಮಾನವಿ ತಾಲೂಕಿನ ಅಡವಿ ಖಾನಾಪುರ ಗ್ರಾಮದವರು. ಆರು ವರ್ಷಗಳ ಸೇವಾನುಭವದೊಂದಿಗೆ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪೂರೈಸಿದ್ದು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗು ರಾಜಕೀಯ ಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಜನಮತ ಹಾಗೂ ಇನ್ನಿತರ ರಾಜಕೀಯ ಸಂಸ್ಥೆಗಳಲ್ಲಿ ಮಾಧ್ಯಮ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೆಹಲಿಯ ಯುಎನ್‌ಐ ಮತ್ತು ಒಪೆರಾ ಸುದ್ದಿ ಸಂಸ್ಥೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಯಚೂರಿನ
ಜನವಾದಿ ದಿನ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ

Contact : 9184245011

Email ID :  janavaadi@gmail.com

Follow ಶ್ರೀ ಮಲ್ಲನಗೌಡ ಪಾಟೀಲ್