ಶ್ರೀ ಮಲ್ಲಿಕಾರ್ಜುನ ಸ್ವಾಮಿ
ರಾಯಚೂರಿನಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಸ್ವಾಮಿಯವರು ಮೂಲತಃ ರಾಯಚೂರು ನಗರದವರು. ಹೆಐಇಟಿ ಮದ್ರಾಸ್ ನಿಂದ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಪೂರೈಸಿದ್ದಾರೆ. ಎಲೆಕ್ಟ್ರಾನಿಕ್ಸ್ ಶಾಪ್ ಹಾಗೂ ಸ್ವಂತ ಫೋಟೊ ಸ್ಟುಡಿಯೋ ನಡೆಸುತ್ತಿದ್ದ ಮಲ್ಲಿಕಾರ್ಜುನ ಸ್ವಾಮಿಯವರು 2000 ನೇ ಇಸ್ವಿಯಲ್ಲಿ ಮಾಧ್ಯಮ ಲೋಕದ ಸೆಳೆತದಿಂದ ಉದಯ ಟಿವಿ ಕ್ಯಾಮೆರಾಮನ್ ಆಗಿ ವೃತ್ತಿ ಆರಂಭಿಸಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದರು. ಬಳಿಕ ಸುದ್ದಿ ಮೂಲ, ರಾಯಚೂರು ವಾಣಿ, ವಿಜಯ ಕರ್ನಾಟಕ ,ಕನ್ನಡ ಪ್ರಭ, ವಿಜಯವಾಣಿ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಕಳೆದ 18 ವರ್ಷಗಳಿಂದ ರಾಯಚೂರು ವಾರ್ತಾ ಇಲಾಖೆಗೆ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಛಾಯಾಗ್ರಾಹಕ ವೃತ್ತಿಯ ಜೊತೆಗೆ ಕಳೆದ 18 ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೇಂದ್ರ ಸಂಚಾಲಕರಾಗಿ ಹಾಗೂ ಯೋಗಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಕಾರ್ಯಕಾರಿಣಿ ಸಮಿತಿ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Contact : 9342659737
Email ID : raichurphotos@gmail.com
