ಖಜಾಂಚಿ
ಶ್ರೀ ಕೆ. ಸಣ್ಣ ಈರಣ್ಣ
ಮೂಲತಃ ರಾಯಚೂರಿನವರಾದ ಕೆ.ಸಣ್ಣ ಈರಣ್ಣ ಕಳೆದ 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಯಚೂರಿನ ಸ್ಪಿಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ, ಕೊಪ್ಪಳದಲ್ಲಿ ಬಿ.ಎಡ್, ಮೈಸೂರು ಮಾನಸ ಗಂಗೋತ್ರಿ ಮುಕ್ತ ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜನವಾದಿ ದಿನಪತ್ರಿಕೆಯಿಂದ ಜಿಲ್ಲಾ ವರದಿಗಾರರಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಜನಕೂಗು ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಜನಬಲ ಟೈಮ್ಸ್ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕಾಶವಾಣಿ ರಾಯಚೂರು ಬಾನುಲಿ ಕೇಂದ್ರದಲ್ಲಿ ಉದ್ಘೋಷಕರಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನಲ್ಲಿ ಎರಡನೇ ಅವಧಿಗೆ ಖಜಾಂಚಿಯಾಗಿ ಸೇವೆ, ಮುಂದುವರೆಸಿದ್ದಾರೆ.
Contact : 9902059734
Email ID: kseppreporter@gmail.com
