ಪತ್ರಕರ್ತರ ತುರ್ತು ನಿಧಿ

About Vijay Jagatkal

  • Home
  • About Vijay Jagatkal
ಅಧ್ಯಕ್ಷರು

ಶ್ರೀ ವಿಜಯ್ ಜಾಗಟಗಲ್

ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದವರು. ತುಮಕೂರಿನ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಬಯೋಟೆಕ್ನಾಲಜಿ ಪದವಿ ಮುಗಿಸಿದ್ದು, ಶ್ರೀಸಿದ್ಧಾರ್ಥ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಲ್ಲಿ ಎಂ.ಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿಯಲ್ಲಿ ತುಮಕೂರು ವಿವಿ ಚಿನ್ನದ ಪದಕವನ್ನ ಪಡೆದಿದ್ದಾರೆ.

2010 ರಲ್ಲಿ ತುಮಕೂರಿನ ಅಮರ ಸಂದೇಶ ದಿನಪತ್ರಿಕೆಯಿಂದ ಪತ್ರಿಕೋದ್ಯಮ ಪಯಣವನ್ನ ಆರಂಭಿಸಿದ್ದಾರೆ. ಬಳಿಕ ಉದಯ ನ್ಯೂಜ್, ಕಸ್ತೂರಿ ನ್ಯೂಜ್ 24 ಮಾಧ್ಯಮ ಸಂಸ್ಥೆಗಳಲ್ಲಿ ಕಾಪಿ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದಾರೆ. 2012 ರಿಂದ ಪಬ್ಲಿಕ್ ಟಿವಿ ಸಂಸ್ಥೆಯಲ್ಲಿ ರಾಯಚೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತದಾನ ಜಾಗೃತಿ ಕಿರುಚಿತ್ರಗಳು, ಪರಿಸರ ಕುರಿತ ಸಾಕ್ಷ್ಯಚಿತ್ರಗಳನ್ನ ನಿರ್ಮಾಣ ಮಾಡುವ ಮೂಲಕವೂ ಸಾಮಾಜಿಕ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ತಮ್ಮದೇ ಆದ ಸೇವೆಯನ್ನ ಸಲ್ಲಿಸಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Contact : 9900060837

Email ID : vijay.dreams02@gmail.com

Follow ವಿಜಯ ಜಾಗಟಗಲ್ :