ಜಂಟಿ ಕಾರ್ಯದರ್ಶಿ
ಶ್ರೀ ಶ್ರೀಕಾಂತ್ ಸಾವೂರ್
ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದವರಾದ ಶ್ರೀಕಾಂತ್ ಸಾವೂರು ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಬಿಎಸ್ಸಿ (ಸಿಬಿಜೆಡ್) ಪದವಿಯನ್ನು ಪೂರೈಸಿದ್ದಾರೆ. ಕಳೆದ 9 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2016 ರಲ್ಲಿ ಟಿವಿ1 ಚಾನಲ್ ನಿಂದ ವೃತ್ತಿಯನ್ನ ಆರಂಭಿಸಿ ಕಲಬುರ್ಗಿ ಜಿಲ್ಲಾ ವರದಿಗಾರನಾಗಿ ಒಂದು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2017 ರಿಂದ 2019ರ ವರೆಗೆ ನ್ಯೂಸ್ ಫಸ್ಟ್ ವಾಹಿನಿಯಲ್ಲಿ ವಿಜಯಪುರ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 2019 ರಿಂದ ನ್ಯೂಸ್ ಫಸ್ಟ್ ವಾಹಿನಿಯ ರಾಯಚೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನಲ್ಲಿ ಎರಡನೇ ಅವಧಿಗೆ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Contact : 9449966571
Email ID : shrikanthsawoor3@gmail.com
